106 yahoodi kathegalu

₹ 130

You will earn 1 points from this product

Delivery Options

Get delivery at your doorstep

Product Not Available

ಇಂದು ಇಸ್ರೇಲ್ ಎಂಬ ದೇಶವೇನೋ ಇದೆ. ಆದರೆ ಅದಕ್ಕೆ ಸುತ್ತ ಹದಿನಾರು ಶತ್ರುಗಳು. ಯಾವ ಕಾಲದಲ್ಲಿ ಯಾವ ದೇಶದಿಂದ ಕ್ಷಿಪಣಿ ಬಂದುಬೀಳುತ್ತದೋ ಹೇಳಬರುವುದಿಲ್ಲ. ತಮ್ಮ ಸುಂದರ ಸಮುದ್ರ ಕಿನಾರೆಗಳಲ್ಲಿ ಇವರು ಸ್ವಚ್ಛಂದವಾಗಿ ಅಡ್ಡಾಡುವುದಕ್ಕೂ ಸಾಧ್ಯವಿಲ್ಲ. ಹೀಗೆ ಬೆನ್ನಿಗೆ ಹಾವನ್ನು ಕಟ್ಟಿಕೊಂಡAತೆ ಬದುಕುತ್ತಿರುವ ಈ ದೇಶದಲ್ಲಿ ನಗು ಎಂಬ ಹೂವು ಬಾಡದೆ ಉಳಿದಿದೆ ಎಂಬುದೇ ಒಂದು ವಿಸ್ಮಯ! ಯಹೂದಿಗಳು ಏನೇ ಮಾಡಿದರೂ ಅದರಲ್ಲಿ ತಮ್ಮ ವಿಶಿಷ್ಟತೆ, ಅನನ್ಯತೆಗಳ ಛಾಪು ಇರುವಂತೆ ನೋಡಿಕೊಳ್ಳುತ್ತಾರೆ. ಅವರ ಹಾಸ್ಯವನ್ನು ಓದಿದರೂ ಅದು ಮನದಟ್ಟಾಗುತ್ತದೆ. ಯಹೂದ್ಯರು ತಮ್ಮ ಹಾಸ್ಯಕಥೆಗಳಲ್ಲಿ ಬೇರೆಯವರನ್ನಲ್ಲ; ತಮ್ಮನ್ನೇ ಅಣಕಿಸಿಕೊಳ್ಳುತ್ತಾರೆ! ತಮ್ಮ ಧರ್ಮಗುರುವನ್ನು ಜೋಕರ್‌ನಂತೆ ಚಿತ್ರಿಸುತ್ತಾರೆ! ಯಹೂದ್ಯರ ಶಾಣ್ಯಾತನ, ಪೆದ್ದುತನ, ಮುಗ್ಧತೆ, ನಯವಂಚಕ ಬುದ್ಧಿ, ಕಂಜೂಸಿ, ಕರ್ಮಠತನ, ಹಟಮಾರಿತನಗಳೆಲ್ಲವೂ ಅವರ ಹಾಸ್ಯಕತೆಗಳಲ್ಲಿ ಹಸಿಹಸಿಯಾಗಿ ಬರುತ್ತವೆ. ಇಂತಹ ವಿಶಿಷ್ಟವಾದ ಯಹೂದಿ ಹಾಸ್ಯದ ಒಟ್ಟು ೧೦೬ ಸಣ್ಣ ಕತೆಗಳು “ನೂರಾರು ಯಹೂದಿ ಕತೆಗಳು” ಕೃತಿಯಲ್ಲಿ ಬಂದಿವೆ. ಇದು ಯಹೂದಿ ಹಾಸ್ಯದ ಕುರಿತು ಕನ್ನಡದಲ್ಲಿ ಬಂದಿರುವ ಮೊದಲ ಕೃತಿಯೂ ಹೌದು.


Reviews and Ratings

No Customer Reviews

Share your thoughts with other customers